ವ್ಯಾಧಪೃಷ್ಠ
	ಮಹಾವ್ಯಾಧ (ಒರೈಯನ್) ನಕ್ಷತ್ರಪುಂಜದ ಉಜ್ಜ್ವಲತಮ ತಾರೆ (ರೀಗಲ್ ಅಥವಾ-ಒರೈನಸ್). ನಕ್ಷತ್ರಪುಂಜ ರೂಪಿಸುವ ಕಾಲ್ಪನಿಕ ತ್ರಾಪಿಜ್ಯ ಆಕೃತಿಯ ನೈಋತ್ಯ ಶೃಂಗದಲ್ಲಿದೆ. ತಿಳಿನೀಲಿ ದೈತ್ಯ; ಗೋಚರ ಉಜ್ಜ್ವಲತಾಂಕ 0.1; ನಿರಪೇಕ್ಷ ಉಜ್ಜ್ವಲತಾಂಕ 7.1; ಕ್ರಾಂತಿ (ಘಂಟಾವೃತ್ತಾಂಶ ಅಥವಾ ಖಾಗೋಳಿಕ ಅಕ್ಷಾಂಶ, ಡೆಕ್ಲಿನೇಶನ್) 80 13' 13' ದಕ್ಷಿಣ; ವಿಷುವದಂಶ (ಖಾಗೋಳಿಕ ರೇಖಾಂಶ, ರೈಟ್ ಅಸೆಂನ್ಷನ್) 5h 13' 29'; ಸೂರ್ಯನಿಂದ ದೂರ 900 ಜ್ಯೋತಿರ್ವರ್ಷ: ರೋಹಿತ ಪ್ರರೂಪ ಏ3. ಬರಿಗಣ್ಣಿಗೆ ಕಾಣುವಂತೆ ಮೊದಲ 30 ಉಜ್ಜ್ವಲ ನಕ್ಷತ್ರಗಳ ಪೈಕಿ ಇದರದು 7ನೆಯ ಸ್ಥಾನ.			
		*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ